ಇತ್ತ ಸಕಲೇಶಪುರದಿಂದ ಕೇವಲ ಹತ್ತು ಕಿಲೋಮೀಟರ್ ದೂರವಿದ್ದ ಸೋಮೆನಹಳ್ಳಿಯ ರಾಮನಾಥ ಎಸ್ಟೇಟ್‌ನಲ್ಲಿ, ಚಾರ್ವಿಯ ತಂದೆ ರಾಮನಾಥನ ಸಮಾಧಿಯಿತ್ತು.
ಐದನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಅಲ್ಲಿಗೆ ತೆರಳಿದ್ದ ಚಾರ್ವಿಯು ತನ್ನ ತಂದೆಯ ನೆನಪುಗಳನ್ನು ಮೆಲುಕು ಹಾಕುತ್ತ ನಿಧಾನವಾಗಿ ಸಮಾಧಿಯೆಡೆಗೆ ನಡೆದುಹೋಗುತ್ತಲೇ ಅವಳಿಗೆ ಬಹುದೊಡ್ಡ ಅಚ್ಚರಿ ಕಾದಿತ್ತು. ಅವಳಿಗೆ ಅವಳನ್ನೇ ನಂಬಲಾಗಲಿಲ್ಲ. ತನ್ನೆದುರಿಗಿದ್ದ ಆ ಭಯಾನಕ ದೃಶ್ಯವನ್ನು ಕಂಡು ಬೆಚ್ಚಿಬಿದ್ದ ಚಾರ್ವಿಯ ಕೈಗಳು ನಡುಗುವ ಧಾಟಿಗೆ ಅವಳ ಕೈಯಲ್ಲಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರು ನೆಲಕ್ಕುರುಳಿ ಅದರಲ್ಲಿದ್ದ ಪೂಜಾ ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾದವು.
ಓ ಮೈ ಗಾಡ್!! ಎಂದು ಉದ್ಗಾರವೆಳೆಯುತ್ತಾ ಕುಸಿದು ಕುಳಿತ ಚಾರ್ವಿಯ ಎದುರಿಗಿದ್ದ ಅವಳ ತಂದೆಯ ಸಮಾಧಿಯನ್ನು ಯಾರೋ ಅಗೆದಿದ್ದರು. ಸಮಾಧಿಯೊಳಗಿದ್ದ ರಾಮನಾಥನ ಅಸ್ಥಿಪಂಜರದಲ್ಲಿ ತಲೆಬುರುಡೆಯೇ ಇರಲಿಲ್ಲ!! -ಕೌಶಿಕ್ ಕೂಡುರಸ್ತೆ